ಈ ಹೃದಯವೆಂಬ –E hrudayavemba

394

ಈ ಹೃದಯವೆಂಬ ಮನೆಯಲ್ಲಿ ಬಾ ಯೇಸು
ಇಲ್ಲಿ ಬೆಳಕಿಲ್ಲಾ ನೀ ನಿಲ್ಲದೆ
ಈ ಬದುಕಿನ ಹಗಲಲ್ಲಿ ಬಾ ಯೇಸು
ಈ ಹಗಲಲ್ಲೂ ಏಕಾಂತವೇ
ಹೊತ್ತುಹೋಗದು ನೀ ಬರದೆ ಈ ಬಾಳಲಿ
ಕತ್ತಲಾಗದು ಈ ಬದುಕು ನೀನಿದ್ದಲಿ ||

1.ನೀನಿರದ ಮನೆಯಲ್ಲಿ ನಾನ್ಯಾರೋ
ಈ ಮನೆಯ ಹಂಗೆತಕೊ
ಮನೆಯೊಡೆಯ ಮನೆಯೊಳಗೆ ನೀನಿಲ್ಲದೆ
ಒಳಗೆಲ್ಲಾ ಹುಸಿಬದುಕು ||
ಕಣ್ಣಲ್ಲಿ ಮಾತಲ್ಲಿ ನೀ ತುಂಬಿರೋ
ಮನದಲ್ಲಿ ದೃಡವಾಗಿರೋ ||
ಆಕಾರ ನಾನು ಸಾಕಾರ ನೀನು
ನನ್ನಲ್ಲಿ ನೀನಾಗಿರೋ ||

2.ಅಂತರಂಗವ ನೀ ನೋಡಲು
ಮನಸೆಲ್ಲಾ ಬರಿಶೂನ್ಯವು
ತುಂಬಿದ ಕಣ್ಣಲ್ಲಿ ನೀ ಕಾಣದೆ
ಮಾತೆಲ್ಲಾ ಅನ್ವರ್ಥವು ||
ನಡೆಯಲ್ಲಿ ನುಡಿಯಲ್ಲಿ ನೀನಿಲ್ಲದೆ
ಬಹಿರಂಗ ಚೆಲುವೇತಕೋ ||
ಸಾಧನ ನಾನು ಸಾಧಕ ನೀನು
ಬಂಧನ ಬಲವಾಗಿಸೋ ||

E hr̥dayavemba maneyalli ba yesu
illi beḷakilla ni nillade
i badukina hagalalli ba yesu
i hagalallu ekantave
hottuhogadu ni barade i baḷali
kattalagadu i baduku niniddali ||

1.Ninirada maneyalli nan’yaro
i maneya haṅgetako
maneyoḍeya maneyoḷage ninillade
oḷagella husibaduku ||
kaṇṇalli matalli ni tumbiro
manadalli dr̥ḍavagiro ||
akara nanu sakara ninu
nannalli ninagiro ||

2.Antaraṅgava ni noḍalu
manasella barisun’yavu
tumbida kaṇṇalli ni kaṇade
matella anvarthavu ||
naḍeyalli nuḍiyalli ninillade
bahiraṅga celuvetako ||
sadhana nanu sadhaka ninu
Bandhana balavagiso ||

Sharing is caring!

Leave a comment

Your email address will not be published. Required fields are marked *

*
*