ಓ ಕುಂಬಾರ – O kumbara

645

ಓ ಕುಂಬಾರ ನನ್ನ ಒಳ್ಳೆ ಕುಂಬಾರ||2||
ಅದ್ಭುತ ಸ್ವರೂಪನು ಕುಂಬಾರ, ಆಲೋಚನ
ಕರ್ತನು ಕುಂಬಾರ||2||
ಪರಾಕ್ರಮಿಯಾದ  ಪರಲೋಕದ ಕುಂಬಾರ||2||

1.ಈ ಮಣ್ಣಿನ ಪಾತ್ರೆ ಕೆಟ್ಟು ಹೋಗಲು
ಪುನಃ ಪುನಃ ಜೋಡಿಸಿ ನೀ ರೂಪಿಸಿದೆ||2||
ನನಗಾಗಿ ನೀ ನೊಂದು ಬೆಂದು ಬಳಲಿ ಬಾಡಿ
ನನ್ನ ಶೃಂಗರಿಸಿದೆ||2||
ಜೇಡಿಮಣ್ಣು ನಾನೂ ರೂಪಿಸುವಾತನೂ ನೀನು
ಯೇಸು ರೂಪಿಸುವಾತನು ನೀನೂ ||2||

2.ನಿನ್ ಅಂಗೈಯಲ್ಲಿ ಚಿದ್ರಿಸಿಕೊಂಡು
ಹೊಸ ಹೊಸ ಕೃಪೆಗಳಿಂದ ಶೃಂಗರಿಸಿದೆ||2||
ಉತ್ತಮವಾದ ಬಳಕೆಯ ಪಾತ್ರೆಯಾಗಿ
ನಿನ್ನ ಕಾರ್ಯ ಮಾಡಲು ನನ್ನ ಉಪಯೋಗಿಸು||2||
ಜೇಡಿಮಣ್ಣು ನಾನೂ ರೂಪಿಸುವಾತನೂ ನೀನು
ಯೇಸು ರೂಪಿಸುವಾತನು ನೀನೂ ||2||

3.ನನ್ನ ದೋಹದ ದೆಸೆಯಿಂದ ಗಾಯಗೊಂಡೆ
ನೀ ಧಾರೆ ಧಾರೆಯಾಗಿ ರಕ್ತ ಸುರುಸಿದೆ||2||
ಬಹು ಜನಗಳ ಪಾಪ ಕ್ಷಮೆಗಾಗಿ ತಂದೆಯ
ಬಳಿಯಲ್ಲಿ ವಿಜ್ಞಾಪಿಸಿದೆ||2||
ಜೇಡಿಮಣ್ಣು ನಾನೂ ರೂಪಿಸುವಾತನೂ ನೀನು
ಯೇಸು ರೂಪಿಸುವಾತನು ನೀನೂ ||2||

 

O kumbara nanna oḷḷe kumbara||2||
adbhuta svarupanu kumbara,
alochana kartanu kumbara||2||
parakramiyada paralokada kumbara||2||

1.Emaṇṇina patre keṭṭu hogalu
punaḥ punaḥ joḍisi ni rupiside||2||
nanagagi ni nondu bendu baḷali
baḍi nanna shr̥ṅgariside||2||
jeḍimaṇṇu nanu rupisuvatanu ninu
yesu rupisuvatanu ninu ||2||

2. Nin aṅgaiyalli cidrisikoṇḍu
hosa hosa kr̥pegaḷinda sr̥ṅgariside||2||
uttamavada baḷakeya patreyagi
ninna karya maḍalu nanna upayogisu||2||
jeḍimaṇṇu nanu rupisuvatanu ninu
yesu rupisuvatanu ninu ||2||

3. Nanna dohada deseyinda gayagoṇḍe
ni dhare dhareyagi raktha suruside||2||
bahu janagaḷa papa kṣhamegagi tandeya
baḷiyalli vijnapiside||2||
jeḍimaṇṇu nanu rupisuvatanu ninu
yesu rupisuvatanu ninu ||2||

Sharing is caring!

Leave a comment

Your email address will not be published. Required fields are marked *

*
*