ನಾನು ಜೀವದಿಂದಿರುವ ದಿನವೆಲ್ಲ – Nanu jivadinadiruva dinavella

547

ನಾನು ಜೀವದಿಂದಿರುವ ದಿನವೆಲ್ಲ ನಿನ್ನ ಹೊಗಳಿ ಹಾಡುವೆ
ನನ್ನ ಪೂರ್ಣ ಮನಸ್ಸಿನಿಂದಲೆ ನಿನ್ನ ಎಂದಿಗೂ ಸ್ತುತಿಸುವೆ ||

|| ನನಗಾಗಿ ಪ್ರಾಣ ಕೊಟ್ಟ ದೇವರು ನೀನೆ
ನಿನ್ನ ಪ್ರೀತಿಯ ಬಿಟ್ಟು ಅಗಲಿ ನಾನೆಲ್ಲಿಗೆ ಹೋಗಲಿ
ನನ್ನ ಜೀವಮಾನವೆಲ್ಲಾ ನಿನ್ನ ಸ್ತುತಿಸಿ ಹಾಡುವೆ
ಕೊನೆಯವರೆಗೂ ಹೇಳುವೆ ಯೇಸು ಒಳ್ಳೆವನೆಂದು ||

ಒಳ್ಳೆಯವ ನೀನು ಒಳ್ಳೆಯವ
ಒಳ್ಳೇದನ್ನೆ ನನಗೆ ಮಾಡುವವ
ಒಳ್ಳೆಯವ ನೀನು ಒಳ್ಳೆಯವ
ಒಳ್ಳೇದನ್ನೆ ನನಗೆ ಮಾಡುವವ

1.ನಾನು ಬದುಕಿ ಬಾಳಲೆಂದೆಒಪ್ಪಿಸಿಕೊಟ್ಟೆ ನಿನ್ನನೆ
ಬಾಧೆಗೆ ಒಳಪಡಿಸಿದೆ ನಿನ್ನ ದೇಹವ ನನಗಾಗಿ ||

ನಿನ್ನ ಪ್ರೀತಿ ದೊಡ್ಡದು ನಿನ್ನ ಪ್ರೀತಿ ದೊಡ್ಡದು ||
ನಿನ್ನ ಪ್ರೀತಿಗೆ ಕೊನೆಯೇ ಇಲ್ಲ
ನಿನ್ನ ಕೃಪೆಯು ದೊಡ್ಡದು ನಿನ್ನ ಕೃಪೆಯು ದೊಡ್ಡದು ||
ಕೃಪೆಯಾದ ಯೇಸುವೆ… || ಒಳ್ಳೆಯವ

2.ನನ್ನ ಪಾಪವ ನಿನ್ನ ದೇಹದಿ
ಹೊತ್ತುಕೊಂಡು ತೀರಿಸಿದೆ
ಹೊಡೆಸಿಕೊಂಡೆ ನೀ ನನ್ನ ರೋಗವ ನೀಗಲು || ನಿನ್ನ  ||

3.ಶಾಪದ ಮುಳ್ ಮುಕುಟವ
ನಿನ್ನ ಶಿರಸಲ್ಲಿ ಹೊತ್ತುಕೊಂಡೆ
ಶಾಪವಾದೆ ನೀ ನನ್ನ ಆಶೀರ್ವದಿಸಲು  || ನಿನ್ನ ಪ್ರೀತಿ

4.ನನ್ನ ದರಿದ್ರವನ್ನು
ನಿನ್ನ ಮೇಲೆ ಹೊತ್ತುಕೊಂಡೆ
ನಿನ್ನ ಆಶೀರ್ವಾದ ನನ್ನ ಬಾಳಲ್ಲಿ ನೀಡಿದೆ  || ನಿನ್ನ ||

Nanu jivadindiruva dinavella ninna hogaḷi haḍuve
nanna purṇa manas’sinindale ninna endigu stutisuve ||

|| nanagagi praṇa koṭṭa devaru nine
ninna pritiya biṭṭu agali nanellige hogali
nanna jivamanavella ninna stutisi haḍuve
koneyavaregu heḷuve yesu oḷḷevanendu ||

oḷḷeyava ninu oḷḷeyava
oḷḷedanne nanage maḍuvava
oḷḷeyava ninu oḷḷeyava
oḷḷedanne nanage maḍuvava

1.Nanu baduki baḷalende’oppisikoṭṭe ninnane
badhege oḷapaḍiside ninna dehava nanagagi ||

ninna priti doḍḍadu ninna priti doḍḍadu ||
ninna pritige koneye illa
ninna kr̥peyu doḍḍadu ninna kr̥peyu doḍḍadu ||
kr̥peyada yesuve… || Oḷḷeyava

2.Nanna papava ninna dehadi
hottukoṇḍu tiriside
hoḍesikoṇḍe ni nanna rogava nigalu || ninna ||

3.Sapada muḷ mukuṭava
ninna sirasalli hottukoṇḍe
sapavade ni nanna asirvadisalu || ninna priti

4.Nanna daridravannu
ninna mele hottukoṇḍe
ninna asirvada nanna baḷalli niḍide || ninna ||

Sharing is caring!

Leave a comment

Your email address will not be published. Required fields are marked *

*
*