ನಾಳೆಯ ಕುರಿತು-Naley kuritu

227

ನಾಳೆಯ ಕುರಿತು ನನಗೆ ಭಯವಿಲ್ಲ
ಯೇಸು ಕರ್ತನೆ ಎಲ್ಲವ ನೋಡಿಕೊಳ್ಳುವ

1.ಕರ್ತನೆ ನನ್ನ ಬೆಳಕು ರಕ್ಷಕನು
ಭಯವೆ ನನಗಿಲ್ಲ
ಆತನೆ ನನ್ನ ಬಾಳಿನ ಬಲವಾದ
ಯಾರಿಗು ಅಂಜೆನು

2.ಅಪತ್ತು ಕಾಲದಿ ಗೂಡಾರಮರೆಯಲ್ಲಿ
ಅಡಗಿಸಿ ಕಾಯ್ವನು
ಶಿಖರದ ಮೇಲೆ ಸುರಕ್ಷಿತ ವಾಗಿಡುವ
ಕಳವಳ ನನಗಿಲ್ಲ

3.ತಂದೆಯು ತಾಯಿಯು ನನ್ನನ್ನು ಕೈಬಿಟ್ಟರೂ
ಕರ್ತನು ಕೈ ಬಿಡನು
ಕರ್ತನಿಗಾಗಿ ದಿನವು ಕಾದಿರುವೆ
ಹೊಸ ಬಲ ಹೊಂದುವೆ

4.ಕರ್ತನ ಬಳಿಯಲ್ಲಿ ಒಂದನೇ ಬೇಡುವೆನು
ಅದನ್ನೇ ನಾ ಬಯಸುವೆನು
ಜೀವಮಾನವೆಲ್ಲಾ ಆತನ ಸನ್ನಿಧಿಯಲ್ಲಿ
ಬಲವನ್ನು ಹೊಂದುವೆ

Naḷeya kuritu nanage bhayavilla
yesu kartane ellava noḍikoḷḷuva

1.Kartane nanna beḷaku rakṣhakanu
bhayave nanagilla
atane nanna baḷina balavada
yarigu an̄jenu

2.Apattu kaladi guḍaramareyalli
aḍagisi kayvanu
sikharada mele surakṣhita vagiḍuva
kaḷavaḷa nanagilla

3.Tandeyu tayiyu nannannu kaibiṭṭaru
kartanu kai biḍanu
kartanigagi dinavu kadiruve
hosa bala honduve

4kartana baḷiyalli ondane beḍuvenu
adanne na bayasuvenu
jivamanavella atana sannidhiyalli
balavannu honduve

Sharing is caring!

Leave a comment

Your email address will not be published. Required fields are marked *

*
*