ನಾ ನಿನ್ನ ಸೃಷ್ಠಿಸಿದ ದೈವಾ-Na ninna srusthisida daiva

448

ನಾ ನಿನ್ನ ಸೃಷ್ಠಿಸಿದ ದೈವಾ
ನಾ ನಿನ್ನ ರಕ್ಷಿಸಿದ ದೈವಾ
ನಾ ನಿನ್ನ ಹಾದಿಯಲಿ
ಕರಹಿಡಿದು ನಡೆಸುವಾ
ಎಂದೆಂದೂ ಜೀವಿಸುವ ದೈವಾ

ಹೆದರದಿರೂ ಮಗನೆ ಮಗಳೇ
ನಾ ನಿನ್ನ ಕಾಯುವೆನು
ಅಂಜದಿರೂ ಓ ಮುದ್ದು ಕಂದಾ
ನಾ ನಿನ್ನ ಜೊತೆ ಇರುವೇ

1.ನಾ ನಿನ್ನ ಪ್ರೀತಿಸುವ ದೈವಾ
ನಾ ನಿನ್ನ ಕರುಣಿಸುವ ದೈವಾ
ಜಗವೆಲ್ಲಾ ನಿನ್ನ ಕೈ ಬಿಟ್ಟರೂ ಕಂದಾ
ನಾ ನಿನ್ನ ಕೈ ಬಿಡೆನು ಚಿನ್ನಾ – ಹೆದರದಿರೂ

2.ಪಾಪದ ಬಲೆಯಿಂದ ನಿನ್ನಾ
ಬಿಡಿಸಿ ನಾ ಕಾಯುವೆ ಕಂದಾ
ನಿನ್ನಾ ರಕ್ಷೆಗಾಗಿ ನನಗಾಯ್ತು ಶಿಕ್ಷೆ
ಕಲ್ವರಿ ಶಿಲುಬೆಯೇ ರಕ್ಷೆ – ಹೆದರದಿರೂ

Na ninna sr̥ṣṭhisida daiva
na ninna rakṣisida daiva
na ninna hadiyali
karahiḍidu naḍesuva
endendu jivisuva daiva

hedaradiru magane magaḷe
na ninna kayuvenu
an̄jadiru o muddu kanda
na ninna jote iruve

1.Na ninna pritisuva daiva
na ninna karuṇisuva daiva
jagavella ninna kai biṭṭaru kanda
na ninna kai biḍenu cinna – hedaradiru

2.Papada baleyinda ninna
biḍisi na kayuve kanda
ninna rakṣegagi nanagaytu sikṣe
kalvari silubeye rakṣe – hedaradiru

Sharing is caring!

Leave a comment

Your email address will not be published. Required fields are marked *

*
*