ನಿನ್ನ ಪ್ರೀತಿಯಲ್ಲಿ ಲೀನನಾದೆ -Ninna pritiyalli linanade

249

ನಿನ್ನ ಪ್ರೀತಿಯಲ್ಲಿ ಲೀನನಾದೆ ನಾ
ನಿನ್ನ ಬಾಹುವನ್ನು ಆದುಕೊಂಡೆ ನಾ
ಓ ಯೇಸುವೆ ನಿನ್ನ ಪ್ರೀತಿಗೆ
ಬದಲೇನನ್ನು ನಾ ನೀಡಲಿ
ನನ್ನ ಆತ್ಮವಾ ನನ್ನ ದೇಹವಾ
ಸಮರ್ಪಿಸುತಾ ನಾ ಹಾಡುವೆ
ನಿನ್ನ ಪ್ರೀತಿಯಲ್ಲಿ …
1.ಕೋಮಲವಾದ ಆ ಕರಗಳು
ನನ್ನ ಪಾಪಕ್ಕೆ ಘೋರವಾಯಿತು
ಆ ಕರಗಳೇ ಈ ಪಾಪಿಯಾ
ಅಪ್ಪಿಕೊಳ್ಳಲು ಸಿದ್ದವಾಯಿತು
ನಿನ್ನ ಪ್ರೀತಿಯಲ್ಲಿ …
2.ಸುಂದರವಾದ ಆ ಅಧರವು
ನನ್ನ ದ್ರೋಹದಿ ಕುರೂಪವಾಯಿತು
ಆ ಅಧರವೇ ಈ ದ್ರೋಹಿಯಾ
ಚುಂಬಿಸುತ್ತಲೇ ಸ್ವೀಕರಿಸಿತು
ನಿನ್ನ ಪ್ರೀತಿಯಲ್ಲಿ …
3.ಅತಿಶಯವಾದ ಆ ಪಾದವು
ನನ್ನ ದೋಷಕ್ಕೆ ಗಾಯಗೊಂಡಿತು
ಆ ಪಾದವೇ ಈ ದೋಷಿಗೇ
ದಾರಿ ತೋರುವಾ ದೀಪವಾಯಿತು
ನಿನ್ನ ಪ್ರೀತಿಯಲ್ಲಿ …

Ninna pritiyalli linanade na
ninna bahuvannu adukonde na
o yesuve ninna pritige
badalenannu na nidali
nanna atmava nanna dehava
samarpisuta na haduve
ninna pritiyalli…
1.Komalavada a karagalu
nanna papakke ghoravayitu
a karagale i papiya
appikollalu siddavayitu
ninna pritiyalli…
2.Sundaravada a adharavu
nanna drohadi kurupavayitu
a adharave i drohiya
chumbisuttale svikarisitu
ninna pritiyalli…
3.Atishayavada a padavu
nanna doshakke gayagonditu
a padave i doshige
dari toruva dipavayitu
ninna pritiyalli…

Sharing is caring!

Leave a comment

Your email address will not be published. Required fields are marked *

*
*