ಎಲ್ಲಾ ನಿನ್ ಕೃಪೆಯೆ –Ella nin krupeye

683

ಎಲ್ಲಾ ನಿನ್ ಕೃಪೆಯೆ ಎಲ್ಲಾ ನಿನ್ ಕೃಪೆಯೆ
ನಾನಿರುವುದು ನಿನ್ ಕೃಪೆಯೇ
ನಾ ಉಳಿದಿರುವುದು ನಾಶವಾಗದಿರುವದು
ಅಪ್ಪಾ ನಿನ್ನ  ಕೃಪೆಯೇ
|| ಯೇಸಪ್ಪಾ ಎಲ್ಲಾ ನಿನ್ ಕೃಪೆಯೇ
ಯೇಸಪ್ಪಾ ಎಲ್ಲಾ ನಿನ್ ದಯೆಯೇ ||
ನಾನು ಹೆಚ್ಚಿಸಿಕೊಳ್ಳುವುದಕ್ಕೆ ಏನು ಇಲ್ಲಪ್ಪಾ
ಎಲ್ಲಾ ನಿನ್ನ ಕೃಪೆಯೇ || ಎಲ್ಲಾ ನಿನ್ ||

ಪಾಪಿಯಾದ ನನ್ನನ್ನು ಪ್ರೀತಿಸಿದ್ದು
ಎಲ್ಲಾ ನಿನ್ನಾ ಕೃಪೆಯೇ
ನಾಶನದ ಗುಂಡಿಯಿಂದ ಮೇಲೆತ್ತಿದ್ದು
ಎಲ್ಲಾ ನಿನ್ನಾ ಕೃಪೆಯೇ ||
ನಿನ್ನ ಪರಿಶುದ್ಧ ರಕ್ತದಿಂದ ನನ್ನ ತೊಳೆದದ್ದು
ಅಪ್ಪಾ ನಿನ್ನ ಕೃಪೆಯೇ
ನಿನ್ನ ಮಹಿಮೆಯ ರಾಜ್ಯದಲ್ಲಿ ನನ್ನ ಸೇರಿಸಿದ್ದು
ಅಪ್ಪಾ ನಿನ್ ಕೃಪೆಯೇ  || ಎಲ್ಲಾ ನಿನ್ ||

ಬಲವಿಲ್ಲದಿರುವಾಗೆಲ್ಲ ಬಲಪಡಿಸಿದ್ದು
ಎಲ್ಲಾ ನಿನ್ನಾ  ಕೃಪೆಯೇ
ಈವರೆಗೂ ಕಾದು ನನ್ನ ನಡೆಸುತ್ತಿರುವುದು
ಎಲ್ಲಾ ನಿನ್ನಾ  ಕೃಪೆಯೇ ||
ನನ್ನ ಹೆಚ್ಚಿಸಿ ವೃದ್ಧಿಸಿ ಆಶೀರ್ವದಿಸಿದ್ದು
ಅಪ್ಪಾ ನಿನ್ನಾ ಕೃಪೆಯೇ
ನನ್ನ ಪೋಷಿಸಿ ರಕ್ಷಿಸಿ ಜೊತೆಗಿರುವುದು
ಅಪ್ಪಾ ನಿನ್ನಾ ಕೃಪೆಯೇ | ಎಲ್ಲಾ ನಿನ್ |

Ella nin kr̥peye ella nin kr̥peye
naniruvudu nin kr̥peye
na uḷidiruvudu nasavagadiruvadu
appa ninna kr̥peye
|| yesappa ella nin kr̥peye
yesappa ella nin dayeye ||
nanu heccisikoḷḷuvudakke enu illappa
ella ninna kr̥peye || ella nin ||

papiyada nannannu pritisiddu
ella ninna kr̥peye
nasanada guṇḍiyinda melettiddu
ella ninna kr̥peye ||
ninna parisud’dha raktadinda nanna toḷedaddu
appa ninna kr̥peye
ninna mahimeya rajyadalli nanna serisiddu
appa nin kr̥peye || ella nin ||

balavilladiruvagella balapaḍisiddu
ella ninna kr̥peye
ivaregu kadu nanna naḍesuttiruvudu
ella ninna kr̥peye ||
nanna heccisi vr̥d’dhisi asirvadisiddu
appa ninna kr̥peye
nanna poṣisi rakṣisi jotegiruvudu
Appa ninna kr̥peye | ella nin |

Sharing is caring!

Leave a comment

Your email address will not be published. Required fields are marked *

*
*