ಕನಸು ಕಾಣುತ್ತಿದೆ – Kanasu kaṇuttide

426

ಕನಸು ಕಾಣುತ್ತಿದೆ ಮನಸ್ಸು ಕುಣಿಯುತಿದೆ ||
ಓ ದೇವ ನಿನ್ನನು ನೋಡಲು ನನ್ನ
ಮನವು ಕಾಯುತಿದೆ || ಕನಸು ಕಾಣುತ್ತಿದೆ ||

ಮುಂಜಾನೆ ಮಂಜಲಿ ನಾ ನಿನ್ನ ನೋಡಿದೆ
ಗಾಳಿಯಂತೆ ನನ್ನೊಳಗೆ ನೀ ಸೇರಿದೆ ||
ಆ ಕ್ಷಣವೆ ನನ್ನ ಬಾಳು ಹಸಿರಾಯಿತು
ಹೂವಂತೆ ಗಮಗಮಿಸಿತು || ಕನಸು ||

ಕತ್ತಲೆಯ ಬಾಳಿಗೆ ಬೆಳಕಾಗಿ ನೀ ಬಂದೆ
ಈ ಜೀವಕೆ ಹೊಸ ದಾರಿಯ ನೀ ತೋರಿದೆ ||
ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು
ನವಿಲಿನಂತೆ ನಲಿದಾಡಿತು || ಕನಸು ||

Kanasu kaṇuttide manas’su kuṇiyutide ||
o deva ninnanu noḍalu nanna
manavu kayutide || kanasu kaṇuttide ||

mun̄jane man̄jali na ninna noḍide
gaḷiyante nannoḷage ni seride ||
a kṣhaṇave nanna baḷu hasirayitu
huvante gamagamisitu || kanasu ||

kattaleya baḷige beḷakagi ni bande
i jivake hosa dariya ni toride ||
a kṣhaṇave nanna hr̥udaya kuṇidaḍitu
navilinante nalidaḍitu || kanasu ||

Sharing is caring!

Leave a comment

Your email address will not be published. Required fields are marked *

*
*