ಕಲ್ವಾರಿನಾಥ ಹೊಗಳುವೇ ನಾನು, – Kalvarinatha hogaḷuve nanu

310

ಕಲ್ವಾರಿನಾಥ ಹೊಗಳುವೇ ನಾನು,
ಪ್ರೀತಿಯಿಂದ ಕೂಡಿ ಬಂದೆನು,
ಶಿಲುಭೆನಾಥನ ಕಷ್ಟವ ನೋಡಿ,
ಪ್ರೀತಿಯಿಂದ ನಾ ಹೇಳಲು ಬಂದೇ,
ನೀ ನನ್ನನ್ನೂ ಬಾಳಿಸಲೇಂದೆ ಲೋಕ ಪಾಪವ ಹೊತ್ತನು.
ಎಲ್ಲ ಪಾಪವ ನೀಗಲಿ ಎಂದೂ ತನ್ನ ಮಹಿಮೆಯ ಕೊಟ್ಟನು.
ನಿನಗಾಗಿ ಸತ್ತನು, ನಿನಗಾಗಿ ಎದ್ದನು.
ನಿನಗಾಗಿ ಇಂದು ಜೀವಿಸುವನು.
ನಿನಗಾಗಿ ಬಾಳುವ ನಮ್ಮ ಯೇಸುವ ಹೃದಯದೀ ನಿನ್ನ
ತೋರೆಯದಿರು.
ಹಣನಗೆಯಲ್ಲ ನಿನಗೆ ನಿನ್ನ ಹೃದಯವನ್ನು ಕೇಳುವನು.
ನಿನ್ನ ಹೃದಯವನ್ನು ಕೊಟ್ಟು ನೋಡು.
ಜೀವ ಉನ್ನತವಾಗಿ ಮಾಡುವನು.

ನೀನು ಬಾಳಲೆಂದಲೇ ತನ್ನ ಜೀವ ಕೊಟ್ಟರು.
ನಿನ್ನನ್ನು ಸೇರಿಸಿಕೊಳ್ಳಲು ತನ್ನ ಮಹಿಮೆಯ ಬಿಟ್ಟರು… //2//

ಶಿಲುಭೆಯ ಹೊತ್ತ ಯೇಸುನಾದನು ನಿನಗಾಗೆ ತಾನೇ ಅತ್ತನು.
ಪಾಪವ ಅರಿಯದ ಪರಿಶುಧ್ಧನು ನಿನಗಾಗಿ
ಜಡಿಯಲ್ಪಟ್ಟನು.
ನಿನಗಾಗಿ ಕಷ್ಟವೂ, ನಿನಗಾಗಿ ಬಾಧೆಯೂ,
ಯೇಸು ತನ್ನಲ್ಲಿ ತೆಗೆದುಕೊಂಡನು.
ಎಷ್ಟೋಂದು ಪ್ರೀತಿ ಇರುವ ದೇವನಾ ನಿನ್ನ ಮನದಿಂದ
ಮರೆಯದಿರು.

ಪಾಪವ ಅರಿಯದ ಪರಿಶುಧ್ದನು ನಿನಗಾಗಿ ಜೀವ ಕೊಟ್ಟರು,
ನಿನ್ನನ್ನು ಸೇರಿಸಿಕೊಳ್ಳಲು ತನ್ನ ಮಹಿಮೆಯ ಬಿಟ್ಟರು… //2//

ನಿನ್ನ ಭಾರವ ನಾ ಹೊತ್ತುವೆನೆಂದು, ಹೇಳುವ ಯಾರನ್ನೂ
ಕಂಡಿರುವೆಯಾ.
ನಿನ್ನ ಭಾರವ ನಾ ಹೊರವೆನೆಂದು, ಹೇಳುವ ನನ್ನೇಸು.
ತನ್ನ ಹಸ್ತದೀ ಚಿತ್ರೀಸಿದ ದೇವಾ, ನಿನ್ನ ಮನದಿಂದ
ತೊರೆಯದಿರು.
ಜೀವ ಕೊಟ್ಟ ಆ ದೇವನ ನೀ ಮರೆಯದಿರು, ಎಂದು ಮರೆಯದಿರು…

 

Kalvarinatha hogaḷuve nanu,
pritiyinda kuḍi bandenu,
shilubhenathana kaṣṭava noḍi,
pritiyinda na heḷalu bande,
ni nannannu baḷisalende loka papava hottanu.
Ella papava nigali endu tanna mahimeya koṭṭanu.
Ninagagi sattanu, ninagagi eddanu.
Ninagagi indu jivisuvanu.
Ninagagi baḷuva nam’ma yesuva hr̥udayadi ninna
toreyadiru.
Haṇanageyalla ninage ninna hr̥dayavannu keḷuvanu.
Ninna hr̥dayavannu koṭṭu noḍu.
Jiva unnatavagi maḍuvanu.

Ninu baḷalendale tanna jiva koṭṭaru.
Ninnannu serisikoḷḷalu tanna mahimeya biṭṭaru… //2//

Shilubheya hotta yesunadanu ninagage tane attanu.
Papava ariyada parisudhdhanu ninagagi
jaḍiyalpaṭṭanu.
Ninagagi kaṣṭavu, ninagagi badheyu,
yesu tannalli tegedukoṇḍanu.
Eṣṭondu priti iruva devana ninna manadinda
mareyadiru.

Papava ariyada parisudhdanu ninagagi jiva koṭṭaru,
ninnannu serisikoḷḷalu tanna mahimeya biṭṭaru… //2//

Ninna bharava na hottuvenendu, heḷuva yarannu
kaṇḍiruveya.
Ninna bharava na horavenendu, heḷuva nannesu.
Tanna hastadi chitrisida deva, ninna manadinda
toreyadiru.
Jiva koṭṭa a devana ni mareyadiru, endu mareyadiru…

Sharing is caring!

Leave a comment

Your email address will not be published. Required fields are marked *

*
*