ಜೀವಿಸುವೇ ನಾನು ನಿನಗಾಗಿ-Jivisuve nanu ninagagi

333

ಜೀವಿಸುವೇ ನಾನು ನಿನಗಾಗಿ
ನನ್ನ ಜೀವಿತ ಕಾಲವೆಲ್ಲಾ
ಕಷ್ಟವೂ ಇದ್ದರು ನಷ್ಟವೂ ಇದ್ದರು
ವ್ಯಾಧಿಯು ತಾಕಿದರು ಹಿಂಸೆಯು ಕಾಡಿದರು

1.ಜೀವವು ಇಲ್ಲದ ಆ ಚಿಕ್ಕ ಮಗಳನ್ನು
ಕೈ ಹಿಡಿದು ಜೀವವನ್ನು ಕೊಟ್ಟಿದಿಯೇ
ಅವಳಿಗೆ ಆಹಾರ ನೀಡಲು ಹೇಳಿದಿಯೇ

2.ಜೀವವೂ ಇಲ್ಲದ ಆ ಯೌವನಸ್ಥ ನನ್ನು
ಮಾತಿನಿಂದ ಜೀವವನ್ನು ಕೊಟ್ಟಿದಿಯೇ
ತಾಯಿಗೆ ಅವನನ್ನು ಒಪ್ಪಿಸಿದಿಯೇ

3.ಜೀವವೂ ಇಲ್ಲದ ಆಲಾಜರನಿಗೆ
ಕರೆದೆ ಜೀವವನ್ನು ಕೊಟ್ಟಿದಿಯೇ
ಕಟ್ಟುಗಳ ಬಿಚ್ಚಿರಿ ಎಂದು ಹೇಳಿದೆಯೇ

4.ಜೀವವೂ ಇಲ್ಲದ ಈ ದಾಸನ ಕರೆದ
ಪ್ರೀತಿಯಿಂದ ಆರಿಸಿ ಕೊಂಡಿದಿಯೇ
ಜೀವವನ್ನು ಕೊಟ್ಟು ನಡೆಸಿದಿಯೇ

Jivisuve nanu ninagagi
nanna jivita kalavella
kaṣṭavu iddaru naṣṭavu iddaru
vyadhiyu takidaru hinseyu kaḍidaru

1.Jivavu illada a cikka magaḷannu
kai hiḍidu jivavannu koṭṭidiye
avaḷige ahara niḍalu heḷidiye

2.Jivavu illada a yauvanastha nannu
matininda jivavannu koṭṭidiye
tayige avanannu oppisidiye

3.Jivavu illada alajaranige
karede jivavannu koṭṭidiye
kaṭṭugaḷa bicciri endu heḷideye

4.Jivavu illada i dasana kareda
pritiyinda arisi koṇḍidiye
jivavannu koṭṭu naḍesidiye

Sharing is caring!

Leave a comment

Your email address will not be published. Required fields are marked *

*
*