ನನಗಾಗಿ ಬರಲಿರುವ ಯೇಸು – Nanagagi baraliruva yesu

387

ನನಗಾಗಿ ಬರಲಿರುವ ಯೇಸು
ನನ್ನನ್ನು ಕರೆದೊಯ್ವ ಯೇಸು
ನನ್ನ ಉಸಿರಲ್ಲಿ ಹೆಸರಿರುವ ಯೇಸು
ನನ್ನ ಬಾಳಲ್ಲಿ ಬೆಳಕಾದ ಯೇಸು|2|
ಯೇಸು ರಾಜ ಬರುವನು ಆತನೊಂದಿಗೆ ಹಾರುವೆನು||2||

ಕಣ್ರೆಪ್ಪೆ ಬಡಿವ ಸಮಯದಲ್ಲಿ
ಕರ್ತನ ಮುಖವನ್ನು ನೋಡುವೆವು
ಕರ್ತಾದಿ ಕರ್ತನ ಸ್ತುತಿಸುತ್ತಾ
ಆರ್ಭಟಿಸಿ ಕುಣ ದಾಡುವೆವು
ಸಂಕಟವು ಇಲ್ಲ ಅಲ್ಲಿ ಬಾಧೆಯು ಇಲ್ಲ
ದಾಹವಿನ್ನಿಲ್ಲಾ ಹಸಿವು ಇನ್ನಿಲ್ಲ ||ಯೇಸು||

ಬಂಗಾರದ ಬೀದಿಯಲ್ಲಿ ನಡೆದು
ಜೀವಜಲದ ನದಿಯಲ್ಲಿ ಕುಡಿದು

ಜೀವಜಲದ ನದಿಯಲ್ಲಿ ಕುಡಿದು
ಜೀವ ವೃಕ್ಷದ ಫಲವನ್ನು ಸವಿದು ನಿತ್ಯ ನಿತ್ಯವಾಗಿ ಜೀವಿಸುವೆ
ಸೂರ್ಯನು ಬೇಕಿಲ್ಲ,ಅಲ್ಲಿ ಚಂದ್ರನು ಬೇಕಿಲ್ಲ
ಕಾರ್ಮೋಡವು ಇಲ್ಲ,ಅಲ್ಲಿ ಕಾರ್ಗತ್ತಲೆ ಇಲ್ಲ ||ಯೇಸು||

ದೇವರ ಮುಖವನ್ನು ನೋಡುವೆವು
ನಮ್ಮ ಎಲ್ಲ ನೋವನ್ನು ಮರೆಯುವೆವು
ನಾವಾತನ ಸೇವೆ ಮಾಡುವೆವು ಹರ್ಷಿಸುತ್ತಾ ಆರಾಧಿಸುವೆವು
ದುಃಖವು ಇಲ್ಲ ಅಲ್ಲಿ ಕಷ್ಟವು ಇಲ್ಲ
ಚಿಂತೆಯು ಇಲ್ಲ ಅಲ್ಲಿ ಕಣ್ಣಿರು ಇಲ್ಲ ||ಯೇಸು||

Nanagagi baraliruva yesu
nannannu karedoyva yesu
nanna usiralli hesariruva yesu
nanna balalli belakada yesu|2|
yesu raja baruvanu atanondige haruvenu||2||

kanreppe badiva samayadalli
kartana mukhavannu noduvevu
kartadi kartana stutisutta
arbhatisi kuna daduvevu
sankatavu illa alli badheyu illa
dahavinnilla hasivu innilla ||yesu||

bangarada bidiyalli nadedu
jivajalada nadiyalli kudidu

jivajalada nadiyalli kudidu
jiva vruksada phalavannu savidu nitya nityavagi jivisuve
suryanu bekilla,alli chandranu bekilla
karmodavu illa,alli kargattale illa ||yesu||

devara mukhavannu noduvevu
namma ella novannu mareyuvevu
navatana seve maduvevu harshisutta aradhisuvevu
duhkhavu illa alli kastavu illa
chinteyu illa alli kana niru illa ||yesu||

Sharing is caring!

Leave a comment

Your email address will not be published. Required fields are marked *

*
*