ನನ್ನೋಡೆ ನೀನು ಮಾತಾಡಿದರೇ – Nannoḍe ninu mataḍidare

356

ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು
ಪ್ರಭು… //2//
ನನ್ ಪ್ರೀಯನೇ ಹಿತ ಚಿಂತಕನೇ, ನನ್ ಪ್ರಾಣನಾಥನೇ,
ನನ್ನ ರಕ್ಷಕ… //2//
ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು…

1.ತಂದೆ ಮಾತು ಮೀರಿ ಮನೆ ಬಿಟ್ಟು ಹೋದೆನು,
ತಪ್ಪೀ ಹೋಗಿ ನಾನು ಊರ ಸುತ್ತಿ ಅಲೆದನು,
ಸ್ನೇಹಿತರೆಲ್ಲರೂ, ನನ್ನ ತೊರೆದು ಹೋದರೂ,
ಹಸಿವೆಯಿಂದ ನಾನು ಬಳಲಿ ದಿನಾ ಸಾಯುತ್ತಿರುವೆನು.
ಒಂದು ಮಾತು ಸಾಕು, ಒಂದೇ ಮಾತು ಸಾಕು,
ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2//
ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು…

2.ಯುದ್ಧ ಕಾಲದಲ್ಲಿ ಮನೆ ಮೇಲೆ ನಿಂತೂ,
ನೋಡಬಾರದ ದೃಶ್ಯವ ಕಣ್ಣಾರೇ ನೋಡಿದೆ,
ಬುದ್ದಿಹೀನನಾಗಿ ಅಂಕೆಮೀರಿ ಹೋದೆನು,
ನಿನ್ನ ದೃಷ್ಟಿಯಲ್ಲಿ ನಾ ಘೋರ ಪಾಪ ಮಾಡಿದೆ.
ಒಂದು ಮಾತು ಸಾಕು, ಒಂದೇ ಮಾತು ಸಾಕು,
ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2//

3.ಹೇಳದಿದ್ದ ವಿಷಯವ ಹೇಳಿ ಮೂಢನಾದೆನು.
ನಿನ್ನ ಆತ್ಮ ಬಿಟ್ಟಾಗ ಬವ ಕಳೆದುಕೊಂಡೆನು.
ಕುರುಡನಾಗಿ ನಾನು ಕಾಣ ಸುತ್ತುತ್ತಿರುವೆನು.
ದಿಕ್ಕು ಇಲ್ಲದೇ, ನಾನು ನಿನ್ನ ದಯವ ಕೋರಿದೆನು.
ಒಂದು ಮಾತು ಸಾಕು, ಒಂದೇ ಮಾತು ಸಾಕು,
ನಿನ್ನ ಮಾತು ಸಾಕು, ನನ್ನ ಯೇಸಯ್ಯ… //2//

ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು
ಪ್ರಭು… //2//
ನನ್ ಪ್ರೀಯನೇ ಹಿತ ಚಿಂತಕನೇ, ನನ್ ಪ್ರಾಣನಾಥನೇ, ನನ್ನ ರಕ್ಷಕ… //2//
ನನ್ನೋಡೆ ನೀನು ಮಾತಾಡಿದರೇ, ನಾ ಬದುಕುವೆನು ಪ್ರಭು…

 

 

Nannoḍe ninu mataḍidare, na badukuvenu prabhu… //2//
Nan priyane hita chintakane, nan praṇanathane,
nanna rakṣhaka… //2//
Nannoḍe ninu mataḍidare, na badukuvenu prabhu…

1.Tande matu miri mane biṭṭu hodenu,
tappi hogi nanu ura sutti aledanu,
snehitarellaru, nanna toredu hodaru,
hasiveyinda nanu baḷali dina sayuttiruvenu.
Ondu matu saku, onde matu saku,
ninna matu saku, nanna yesayya… //2//
Nannoḍe ninu mataḍidare, na badukuvenu prabhu…

2.Yud’dha kaladalli mane mele nintu,
noḍabarada dr̥usyava kaṇṇare noḍide,
buddihinanagi aṅkemiri hodenu,
ninna dr̥uṣṭiyalli na ghora papa maḍide.
Ondu matu saku, onde matu saku,
ninna matu saku, nanna yesayya… //2//

3.Heḷadidda viṣhayava heḷi muḍhanadenu.
Ninna atma biṭṭaga bava kaḷedukoṇḍenu.
Kuruḍanagi nanu kaṇa suttuttiruvenu.
Dikku illade, nanu ninna dayava koridenu.
Ondu matu saku, onde matu saku,
ninna matu saku, nanna yesayya… //2//

Nannoḍe ninu mataḍidare, na badukuvenu prabhu… //2//
Nan priyane hita cintakane, nan praṇanathane,
nanna rakṣhaka… //2//
Nannoḍe ninu mataḍidare, na badukuvenu prabhu…

Sharing is caring!

Leave a comment

Your email address will not be published. Required fields are marked *

*
*