ನನ್ನ ಪ್ರಾಣವು ನಿನ್ನ ಬಯಸುತ್ತಿದೆ – Nanna praanavu ninna bayasuttide

2285

ನನ್ನ ಪ್ರಾಣವು ನಿನ್ನ ಬಯಸುತ್ತಿದೆ
ನನ್ನ ಜೀವವು ನಿನ್ನ ಹುಡುಕುತ್ತಿದೆ
ನನ್ನ ನೆನಪುಗಳು ನಿನ್ನ ಸ್ಮರಿಸುತ್ತಿದೆ
ನನ್ನ ಹೃದಯವು ನಿನ್ನ ಹಾಡುತ್ತಿದೆ

1. ನೀನೇ ಬೆಳಕೂ ರಕ್ಷಣೆಯುನನ್ನ ಪ್ರಾಣವು ಆಧಾರವು
ಯಾರಿಗು ಅಂಜೇನು ಯಾರಿಗು ಹೆದರೇನು ಆಶ್ರಯ ನೀನಲ್ಲವೇ
ಯುದ್ಧ ಸನ್ನದ್ಧವಾಗಿ ನಿಂತರೂ ವಿರುದ್ಧವಾಗಿ ದಂಡು ಬಂದರೂ
ವೈರಿಗಳು ನನ್ನ ಬಾಧಿಸಿದರೂ ತಾವೇ ಎಡುವುವರು – ಅವರು

2. ಒಂದೇ ವರವನ್ನು ಕೇಳಿಕೊಂಡೆನು ಅದನ್ನೇ ಎದುರು ನೋಡುತ್ತಿರುವೆನು
ಜೀವಮಾನವೆಲ್ಲಾ ಯೆಹೋವನ ಮನೆಯಲ್ಲಿ ವಾಸಿಸಬೇಕೆಂಬುದೆ
ಅಪಾಯಕಾಲದಲ್ಲಿ ಗುಪ್ತ ಸ್ಥಳದಲ್ಲಿ ನನ್ನ ಅಡಗಿಸಿ ಭದ್ರಪಡಿಸಿ
ಬಂಡೆಯ ಮೇಲೆ ನನ್ನ ಎತ್ತಿ ಎಂದೆಂದೂ ಕಾಪಾಡುವೆ – ನೀನು

3. ವೈರಿಗಳ ಎದುರಲಿ ಮೇಲೆಕ್ಕೆತ್ತಲೂಉತ್ಸಾಹ ಧ್ವನಿಯಿಂದ ಯಜ್ಞಗಳ ಅರ್ಪಿಸಿ
ನಿನ್ನನ್ನು ಹಾಡುತ್ತಾ ವಾದ್ಯಬಾರಿಸುವೆ ಸ್ವರವನ್ನು ಕೇಳುವೆ
ನನ್ನ ಸಾನ್ನಿಧ್ಯಕ್ಕೆ ಬಾ ಎಂದೆ ನಿನ್ನ ಸಾನ್ನಿಧ್ಯಕ್ಕೆ ಬಂದೇ ಬರುವೆನು
ತೊರೆದು ಬಿಡದೆ ರಕ್ಷಿಸುವ ದೇವರೇ ನೀನೇ ಸಹಾಯಕನು – ನನಗೆ

4. ತಂದೆ ತಾಯಿಯು ತೊರೆದುಬಿಟ್ಟರೂ ನೀನು ನನ್ನನ್ನು ಸೇರಿಸಿಕೊಳ್ಳುವೆ
ನಿನ್ನ ಮಾರ್ಗವ ನನಗೆ ಭೋದಿಸಿ ಎಂದೆಂದೂ ನಡೆಸುವೇ
ನಿನ್ನನ್ನೇ ನಾನು ನರೀಕ್ಷಿಸುತ್ತಿರುವೆ ಧೃಡವಾಗಿವೆ ನಂಬಿಕೆಯೊಡನೆ
ಹೃದಯವು ಧೈರ್ಯದಿಂದಿರುವುದು ನಿನ್ನನ್ನೇ ನಿರೀಕ್ಷಿಸುವೇ – ನಾನು ಹಾಡು :

Nanna pranavu ninna bayasuttide
nanna jivavu ninna hudukuttide
nanna nenapugalu ninna smarisuttide
nanna hrudayavu ninna haduttide

1. Nine belaku rakshaneyunanna pranavu adharavu
yarigu anjenu yarigu hedarenu ashraya ninallave
yud’dha sannad’dhavagi nintaru viruddhavagi dandu bandaru
vairigalu nanna badhisidaru tave eduvuvaru – avaru

2. Onde varavannu kelikondenu adanne eduru noduttiruvenu
jivamanavella yehovana maneyalli vasisabekembude
apayakaladalli gupta sthaladalli nanna adagisi bhadrapadisi
bandeya mele nanna etti endendu kapaduve – ninu

3. Vairigala edurali melekkettalu’utsaha dhvaniyinda yajnagala arpisi
ninnannu hadutta vadyabarisuve svaravannu keluve
nanna sannidhyakke ba ende ninna sannidhyakke bande baruvenu
toredu bidade rakshisuva devare nine sahayakanu – nanage

4. Tande tayiyu toredubittaru ninu nannannu serisikolluve
ninna margava nanage bhodisi endendu nadesuve
ninnanne nanu narikshisuttiruve dhrudavagive nambikeyodane
hrudayavu dhairyadindiruvudu ninnanne niriksisuve – nanu hadu:

Leave a comment

Your email address will not be published. Required fields are marked *

*
*