ನಾವು ಆರಾಧಿಸುವ ದೇವರು – Navu aradhisuva devaru

378

ನಾವು ಆರಾಧಿಸುವ ದೇವರು ಒಳ್ಳೆಯವನು
ಬಿಡಿಸಲು ಶಕ್ತಿವಂತನು ||
ಉರಿಯುವ ಜ್ವಾಲೆಗೂ ಅರಸನಿಗೂ
ತಪ್ಪಿಸಲು ಶಕ್ತಿವಂತನು ||

ನಮ್ಮನ್ನು ಕಾಯುವಾತನು ದೂತರನ್ನು ಕಳುಹಿಸುವ
ಬೆಂಕಿಯೂ ಜ್ವಾಲೆಯೂ ನನ್ನ ಮುಟ್ಟದಂತೆ ಕಾಯ್ವನು
ಎಡಬಿಡದೆ ಆರಾಧಿಸೋಣ
ನಮ್ಮ ಬಾಳಲ್ಲಿ ಎಂದು ಜಯವೇ ||
|| ನಾವು ಆರಾಧಿಸುವ ||

ನಮ್ಮನ್ನು ಕರೆದಾತನು ಕೈಬಿಡನು ಎಂದಿಗೂ
ಚಿಂತಿಸದೆ ಮುಂದೆ ಸಾಗಲು ಕೈಹಿಡಿದು ನಡೆಸುವನು
ಎಡಬಿಡದೆ ಆರಾಧಿಸೋಣ
ನಮ್ಮ ಬಾಳಲ್ಲಿ ಎಂದು ಜಯವೇ ||
|| ನಾವು ಆರಾಧಿಸುವ ||

ಶತ್ರುವಿನ ಸೈನ್ಯವನು ಚದುರಿಸಲು ಬಲ ನೀಡುವಾ
ಜಯದಿಂದ ಮುಂದೆ ಹೋಗಲು ತನ್ನ ಹಸ್ತವ ಚಾಚುವನು
ಎಡಬಿಡದೆ ಆರಾಧಿಸೋಣ
ನಮ್ಮ ಬಾಳಲ್ಲಿ ಎಂದು ಜಯವೇ ||
|| ನಾವು ಆರಾಧಿಸುವ ||

Navu aradhisuva devaru oḷḷeyavanu
biḍisalu saktivantanu ||
uriyuva jvalegu arasanigu
tappisalu saktivantanu ||

nam’mannu kayuvatanu dutarannu kaḷuhisuva
beṅkiyu jvaleyu nanna muṭṭadante kayvanu
eḍabiḍade aradhisoṇa
nam’ma baḷalli endu jayave ||
|| navu aradhisuva ||

nam’mannu karedatanu kaibiḍanu endigu
cintisade munde sagalu kaihiḍidu naḍesuvanu
eḍabiḍade aradhisoṇa
nam’ma baḷalli endu jayave ||
|| navu aradhisuva ||

satruvina sain’yavanu cadurisalu bala niḍuva
jayadinda munde hogalu tanna hastava cacuvanu
eḍabiḍade aradhisoṇa
nam’ma baḷalli endu jayave ||
|| Navu aradhisuva ||

Sharing is caring!

2 comments

Leave a comment

Your email address will not be published. Required fields are marked *

*
*