ನಿನ್ ಭೂಯಾತ್ರೆಯ-Nin bhuyatreya

428

ನಿನ್ ಭೂಯಾತ್ರೆಯಾ ಚಿಂತೆಯನ್ನು
ಕರ್ತಗೊಪ್ಪಿಸಿ ನಿಶ್ಚಿಂತನಾಗಿರು ||
|| ಭಯವು ಏತಕ್ಕೆ?ಸಂದೇಹವೇತಕ್ಕೆ ?
ಕರ್ತನಿರುವಲ್ಲಿ ಚಿಂತೆಯೇತಕ್ಕೆ ||

1.ಯೇಸುವಿನೋಡನೆ ಮುಂದೇ ಸಾಗು ನೀ
ಸಂದೇಹ ಪಡದೆ ಆತನ ನಂಬು ನೀ ||
ಬೆಟ್ಟದಂತೆ ಕಷ್ಟ ಬಂದರು ಯೇಸು ಇರುವನು
ನೀ ಯೇಸುವ  ನೋಡು || ನಿನ್ ಭೂಯಾ||

2.ನಿನಗಾದ ಸ್ಥಿತಿಗೆ ಬೆರಗಾಗುತ್ತಿದ್ದರೂ
ಕಣ್ಣೀರ ಕಾಲುವೆ ನೀ ದಾಟುತ್ತಿದ್ದರೂ ||
ನಿನ್ನ ಮೇಲೆ ಮಮತೆ ಇಟ್ಟ ಯೇಸು ಇರುವನು
ನೀ ಯೇಸುವ ನೋಡು || ನಿನ್ ಭೂಯಾ||

3.ಕಾರ್ಗತ್ತಲು ನಿನ್ನನ್ನು ಕವಿದುಕೊಂಡಿರಲು
ದಿಕ್ಕು ಕಾಣದೆ ದೆಸೆಗೆಟ್ಟಿರಲು
ಜ್ಯೋತಿಯಾಗಿ ನಿನ್ನಲ್ಲಿರುವ ಯೇಸುವ ನೋಡು
ನೀ ಯೇಸುವ ನೋಡು || ನಿನ್ ಭೂಯಾ||

4.ನಿನ್ನಯ ಹಿತಕ್ಕೆ ಎಲ್ಲವು ಅಗ್ವದು
ಯೇಸುವಿನ್ ರೂಪಕ್ಕೆ ರೂಪಿತನಾಗಲು
ಶಿಲ್ಪಿಯಾದ ದೇವರು ರೂಪಿಸುತ್ತಿರುವನು
ಈತನ ಪ್ರೀತಿಸು || ನಿನ್ ಭೂಯಾ||

Nin bhuyatreya cinteyannu
kartagoppisi niscintanagiru ||
|| bhayavu etakke?Sandehavetakke?
Kartaniruvalli cinteyetakke ||

1.Yesuvinoḍane munde sagu ni
sandeha paḍade atana nambu ni ||
beṭṭadante kaṣṭa bandaru yesu iruvanu
ni yesuva noḍu || nin bhuya||

2.Ninagada sthitige beragaguttiddaru
kaṇṇira kaluve ni daṭuttiddaru ||
ninna mele mamate iṭṭa yesu iruvanu
ni yesuva noḍu || nin bhuya||

3.Kargattalu ninnannu kavidukoṇḍiralu
dikku kaṇade desegeṭṭiralu
jyotiyagi ninnalliruva yesuva noḍu
ni yesuva noḍu || nin bhuya||

4.Ninnaya hitakke ellavu agvadu
yesuvin rupakke rupitanagalu
silpiyada devaru rupisuttiruvanu
itana pritisu || nin bhuya||

Sharing is caring!

Leave a comment

Your email address will not be published. Required fields are marked *

*
*