ಯಾವಾಗಳು ಕರ್ತನಲ್ಲಿ ಸಂತೋಷಿಸಿರಿ ಸಂತೋಷಿಸಿರಿ
ಎಂದು ತಿರುಗಿ ಹೇಳುತ್ತೇನೆ ಎಂದು ತಿರುಗಿ
ಹೇಳುತ್ತೇನೆ
೧. ಯಾರಾರು ಆತನನ್ನು ಅಂಗೀಕರಿಸಿದರೋ
ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ ಅವರಿಗೆ ಸಿಕ್ಕುವುದು ನಿಜವಾದ ಸಂತೋಷವು
೨. ಯಾರಾರು ಪ್ರಭುವಿನ ಸಮ್ಮುಖದಲ್ಲಿಯೇ
ಹೆಚ್ಚಿನ ಸಮಯವನ್ನು ಕಳೆಯುತ್ತಿರುವರೋ
ಅವರಿಗೆ ಸಿಕ್ಕುವುದು ಪರಲೋಕ ಸಂತೋಷವು
೩. ಯಾರಾರು ಪ್ರಭುವಿನ ವಾಕ್ಯಗಳನ್ನೆಲ್ಲಾ
ಪ್ರೀತಿಸಿ ಕೈಕೊಂಡು ನಡೆಯುತ್ತಿರುವರೋ
ಅವರಿಗೆ ಸಿಕ್ಕುವುದು ಮಹಿಮೆಯ ಸಂತೋಷವು