ಯುಧಾದ ರಾಜಸಿಂಹ – Yudhada rajasimha

620

ಯುಧಾದ ರಾಜಸಿಂಹ ನೀನೆ
ಅಲ್ಫಾವು ಒಮೇಘಾವು ನೀನೆ
ಸ್ತುತಿಗೂ ಮಹಿಮೆಗೆಲ್ಲಾ ಪಾತ್ರನಾದ ಕರ್ತನು
ನೀನೆ ನನ್ನ ಒಳ್ಳೆ ದೇವನೆ ||

ಪಾಪವಾದೆ ನೀ ನನ್ನ ನೀತಿ ಮಾಡಲು
ಶಾಪವಾದೆ ನೀ ನನ್ನ ಶಾಪ ನೀಗಲು
ಗಾಯವಾದೆ ನೀ ನನ್ನ ರೋಗ ನೀಗಲು
ಬಡವನಾದೆ ನೀ ನನ್ನ ದರಿದ್ರ ನೀಗಲು ||

|| ನೀನೆಂದೂ ನನ್ನ ಒಳ್ಳೆ ಕುರುಬ
ನನಗೆಂದೂ ಯಾವ ಕೊರತೆ ಇಲ್ಲ
ಹಸಿರುಗಾವಲಲ್ಲಿ ಕಾಲುವೆಗಳ ಬಳಿ
ನನ್ನ ನಡೆಸೋ ಒಳ್ಳೆ ದೇವನೆ ||

|| ವೈರಿಯ ಮುಂದೆ ಔತಣ ಸಿದ್ಧ ಮಾಡಿ
ತಲೆಯ ಎಣ್ಣೆಯಿಂದ ಅಭಿಷೇಕ ಮಾಡಿಸಿ
ಜೀವಮಾನವೆಲ್ಲಾ ಶುಭವು ಕೃಪೆಯು ಇರುವುದು
ಕರ್ತನ ಮನೆಯಲ್ಲಿ ಎಂದೆಂದೂ ವಾಸಿಸುವೆ ||

|| ನನ್ ಬಾಯಿ ನಿನ್ನ ನೀತಿಯನ್ನು
ದಿನವೆಲ್ಲ ನಿನ್ನ ಸ್ತುತಿಯನ್ನು
ಎಂದೆಂದೂ ಹಾಡಿ ಸ್ತುತಿಸಿ ಕೊರತೆಯೆಲ್ಲ ನೀಗಿಸುವ
ಕರ್ತನಿಗೆ ಸಲ್ಲಿಸುವೆನು ||

||ನಿನ್ನ ಪ್ರಭಾವದ ಐಶ್ವರ್ಯದಿಂದಲೆ
ನನ್ನೆಲ್ಲ ಕೊರತೆಯ ನೀಗಿಸುವ ದೇವನೆ
ಯೆಹೋವ ಯೀರೆ ನೀ ನನ್ನ ಎಲ್ ಷಡಾಯ್
ಕೊರತೆ ನೀಗುವ ಐಶ್ವರ್ಯದಾಯಕನೆ ||

 

Yudhada rajasimha nine
alphavu omeghavu nine
stutigu mahimegella patranada kartanu
nine nanna oḷḷe devane ||

papavade ni nanna niti maḍalu
sapavade ni nanna sapa nigalu
gayavade ni nanna roga nigalu
baḍavanade ni nanna daridra nigalu ||

|| ninendu nanna oḷḷe kuruba
nanagendu yava korate illa
hasirugavalalli kaluvegaḷa baḷi
nanna naḍeso oḷḷe devane ||

|| vairiya munde autaṇa sid’dha maḍi
taleya eṇṇeyinda abhiṣeka maḍisi
jivamanavella subhavu kr̥peyu iruvudu
kartana maneyalli endendu vasisuve ||

|| nan bayi ninna nitiyannu
dinavella ninna stutiyannu
endendu haḍi stutisi korateyella nigisuva
kartanige sallisuvenu ||

||ninna prabhavada aisvaryadindale
nannella korateya nigisuva devane
yehova yire ni nanna el ṣaḍay
korate niguva aisvaryadayakane ||

Sharing is caring!

Leave a comment

Your email address will not be published. Required fields are marked *

*
*