ಯೇಸು ಯೇಸು ಎಂದರೆ – Yesu yesu endare

256

ಯೇಸು ಯೇಸು ಎಂದರೆ
ನನ್ನ ಹೃದಯದಲ್ಲಿ ಆನಂದ ವಾಗುವುದು
ಸಂತೋಷ ಉಕ್ಕುವುದು ||2||
ಇಮ್ಮಾನುವೇಲ ನನ್ನ ಜೊತೆ ಇರುವಾಗ
ಹೇ. ಹೇ. ಹಲ್ಲೆಲೂಯ….. ಹಲ್ಲೆಲೂಯ…. ||2||
ಚಿಂತೆ ದುಃಖ ರೋಗವೆಲ್ಲ ಮಾಯವಾಗುವುದು
ಮರೆಯಾಗಿ ಹೋಗುವುದು||2||

1.ನನ್ನ ತಾಯಿಯ ಗರ್ಭದಲ್ಲಿ ಪಿಂಡವಾಗಿರಲು
ಯೇಸು ನಿನ್ನ ಕಣ್ಣು ನನ್ನ ಪ್ರೀತಿಸಿದವು ||2||
ಹುಟ್ಟಿದ ದಿನದಿಂದ ನನ್ನ ಉದ್ದಾರಕ ನೀನೆ
ನಾ ಹಿಗ್ಗುತ್ತಿರುವುದು ನಿನ್ನಲ್ಲಿಯೇ ||2||
ಆರಾಧನೆ….. ಆರಾಧನೆ ಕರ್ತನಿಗೆ
ನನ್ನ  ಜೀವನದ ಅಧಿಪತಿಗೆ ||2||

2.ಕಾರ್ಗತ್ತಲೆಯಿಂದ ನನ್ನ ಏಳೆದು
ಅತಿಶಯವಾದ ಬೆಳಕಿನಲ್ಲಿ ನಡೆಸಿದಿ ||2||
ಪರಲೋಕದ ರೊಟ್ಟಿ ನೀನೆ ಮುಗಿಯದ ಒರತೆ ನೀನೇ
ಈ ಲೋಕದ ಬೆಳಕು ನೀನೇ (ಆರಾಧನೆ) ||2||

3.ನನ್ನ ಜೊತೆಗಾರರಿಗಿಂತ ಉನ್ನತದಲ್ಲಿ
ಅಭಿಷೇಕಿಸಿ ನನ್ನ ನಿಲ್ಲಿಸಿರುವೆ
ಆದಿಯಲ್ಲಿ ವಾಕ್ಯವಿತ್ತು ಆ ವಾಕ್ಯದ ದೇವರು ನೀನೇ
ಈ ವಾಕ್ಯ ನನಗೆ ಜೀವವಾಯಿತು ||2||

 

Yesu yesu endare
Nanna hr̥udayadalli ananda vaguvudu
santhoṣa ukkuvudu ||2||
Im’manuvela nanna jote iruvaga
he. He. Halleluya….. Halleluya…. ||2||
Chinte duḥkha rogavella mayavaguvudu
mareyagi hoguvudu||2||

1. Nanna tayiya garbhadalli piṇḍavagiralu
yesu ninna kaṇṇu nanna pritisidavu ||2||
huṭṭida dinadinda nanna uddaraka nine
na higguttiruvudu ninnalliye ||2||
aradhane….. Aradhane kartanige
nanna jivanada adhipatige ||2||

2. Kargattaleyinda nanna eḷedu
atishayavada beḷakinalli naḍesidi ||2||
paralokada roṭṭi nine mugiyada orate nine
E lokada beḷaku nine (aradhane) ||2||

3. Nanna jotegarariginta unnatadalli
abhiṣekisi nanna nillisiruve
Adiyalli vakyavittu a vakyada devaru nine
E vakya nanage jivavayitu ||2||

Sharing is caring!

Leave a comment

Your email address will not be published. Required fields are marked *

*
*