ಸಂತೋಷ ಸಮಾಧಾನ ನನ್ನಲ್ಲಿ – Santoosha samaadhaana nannalli

1701

ಸಂತೋಷ ಸಮಾಧಾನ ನನ್ನಲ್ಲಿ ಉಕ್ಕುತಿದೆ
ಏನೆಂದು ನಾ ಹೇಳಲಿ ಯೇಸು ನನ್ನಲ್ಲಿ ಜನಿಸಿರುವ (2)
ತಾನಿತಂದಾನ ತಾನಿತಂದಾನ

ನನ್ನ ಹೃದಯದಿ ಅರಳಿ ನಿಂತಿರುವ ಶಾರೋನಿನ ರೋಜವೆ ನಿಮಗೆ ಸ್ತೋತ್ರವು
ಯಾವಾಗಲೂ ಕಣ್ಣಮುಂದೆ ಶಿಲುಬೆಯನ್ನೆ ನಿಲ್ಲಿಸಿದ ಪ್ರಿತಿಯೇ ನಿಮಗೆ ಸ್ತೋತ್ರವು
ಹಾಡಿ ಕುಣಿಯುವೆ ಕುಣಿದು ಕುಪ್ಪಳಿಸುವೆ (2)
ನನ್ನ ಯೇಸುವಿಗಾಗಿ ಮಹಿಮೆಯ ರಾಜನಿಗಾಗಿ (2)

ಬೇಟೆಗಾರನ ಬಲೆಯಿಂದಲೂ ತಪ್ಪಿಸಿದ ಪ್ರೀತಿಯೇ ನಿಮಗೆ ಸ್ತೋತ್ರವು
ಮರಣಕರ ವ್ಯಾಧಿಯಿಂದಲೂ ಬಿಡಿಸಿದ ಪ್ರೀತಿಯೆ ನಿಮಗೆ
ಸ್ತೋತ್ರವು
ಎಂಥಾ ಪ್ರೀತಿಯು ಆತನ ಪ್ರೀತಿಯು (2)
ಹೊಗಳಲು ಪದಗಳೆ ಇಲ್ಲ ಆತನೆ ನನಗೆ ಎಲ್ಲಾ (2)

ಯೇಸು ರಾಜನೆ ನನ್ನ ಶರಣನು ಆತನೆ ನನ್ನ ಬಲವಾದ ಕೋಟೆ
ಆತನು ನನ್ನ ಜೊತೆ ಇರಲು ವೈರಿಯು ನನಗೆ ಏನು ಮಾಡ್ಯಾನು
ಮೊಣಕಾಲಾಕಿದರೆ ಸೈತಾನ್ ಓಡುವ (2)
ಸರ್ವಶಕ್ತನಲ್ಲಿ ಯೆಸುವಿನ್ ನಾಮದಲ್ಲಿ (2)

Santoosha samaadhaana nannalli ukkutide
enendu naa helali Yesu nannalli janisiruva (2)
taanitandaana taanitandaana

nanna hrudayadi arali nintiruva shaaroonina roojave nimage stotravu
yaavaagalu kannamunde shilubeyanne nillisida pritiye nimage stotravu
haadi kuniyuve kunidu kuppalisuve (2)
nanna Yesuvigaagi mahimeya raajanigaagi (2)

betegaarana baleyindalu tappisida preetiye nimage stotravu
maranakara vyaadhiyindalu bidisida preetiye nimage
stotravu
enthaa preetiyu aatana preetiyu (2)
hogalalu padagale illa aatane nanage ellaa (2)

Yesu raajane nanna sharananu aatane nanna balavaada koote
aatanu nanna jote iralu vairiyu nanage enu maadyaanu
monakaalaakidare saitaan ooduva (2)
sarvashaktanalli Yesuvin naamadalli (2)

One comment

Leave a comment

Your email address will not be published. Required fields are marked *

*
*