ಸಾರ್ಥಕ ನನ್ನೀ ಜೀವನ – Sarthaka nanni jivana

169

ಸಾರ್ಥಕ ನನ್ನೀಜೀವನ ನಿನ್ನನ್ನು ಕಂಡುಕೊಂಡೆ ನಾ
ಪಾವನ ನನ್ನಿ ಹೃದಯ ನಿನ್ನನ್ನು ಅರಿತು ಕೊಂಡಾಗ||2||

1.ಬೇಡಿದೆ ನಾ ನಿನ್ನಲ್ಲಿಯೇ
ಆತ್ಮಿಕ ವರಗಳನ್ನು ದಯಪಾಲಿಸು ಎಂದು ||2||
ನೆರವೇರಿಸಿದೆ ನೀ/ ಯೇಸು ನೆರವೇರಿಸಿದೆ
ನನ್ನ ಆಸೆಯೆಲ್ಲ ಪೂರೈಸಿದೆ||2||

2.ನಿನ್ನ ನೊಗದ ಭಾರವನ್ನು ನಾ ಹೊರುವೇನೆಂದೆ
ನನ್ನ ಕಷ್ಟವೆಲ್ಲ ನೀಗಿಸಿದೇ ||2||
ಪ್ರೀತಿಸಿರುವೇ ಯೇಸು/ನನ್ನ ಪ್ರೀತಿಸಿರುವೆ
ನಿನ್ನ ಕೃಪೆಯಿಂದ ನನ್ನ ಸೆಳೆದುಕೊಂಡೆ||2||

3.ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ
ನಿನ್ನ ಶುಭವು ಕೃಪೆಯು ನನ್ನ ಹಿಂಬಾಲಿಸಲಿ||2||
ಹೋಗುವಾಗಲು ನಾ ಬರುವಾಗಲು
ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸಿತು||2||

Sarthaka nannijivana ninnannu kaṇḍukoṇḍe na
pavana nanni hr̥udaya ninnannu aritu koṇḍaga||2||

1.Beḍide na ninnalliye
athmika varagaḷannu dayapalisu endu ||2||
neraveriside ni/ yesu neraveriside
nanna aseyella puraiside||2||

2.Ninna nogada bharavannu na horuvenende
nanna kaṣṭavella nigiside ||2||
pritisiruve yesu/nanna pritisiruve
ninna kr̥upeyinda nanna seḷedukoṇḍe||2||

3.Nischayavagi nanna jivamanadallella
ninna shubhavu kr̥upeyu nanna himbalisali||2||
hoguvagalu na baruvagalu
ninna doṇṇe kolu nanage dhairya paḍisitu||2||

Sharing is caring!

Leave a comment

Your email address will not be published. Required fields are marked *

*
*