ಹಣ ಹಣ ಶಬ್ದವ-Hana hana sabdava

305

ಹಣ ಹಣ ಹಣ ಹಣ ಶಬ್ದವ ಕೇಳು ಝಣ ಝಣ
ಅದರ ಹಿಂದೆ ನೀ ಹೋದರೆ ನೋಡು
ತರುವದು ನಿನಗೆ ಮರಣ
||ಬದುಕುವದಕ್ಕೆ ಬೇಕು ಹಣ ಹಣಕ್ಕಾಗಿ ಬದುಕೋದು ಕೆಟ್ಟ ಗುಣ ||
ಹಣದಾಸೆಯಿಂದ ದೂರ ಇದ್ದರೆ ಅದುವೇ ಭಕ್ತನ ಶ್ರೇಷ್ಠ ಗುಣ

1.ಎಲೀಷನ ಸೇವಕ ಇದ್ದ ಗೇಹೆಜಿ ಆಸೆ ಬುರುಕ
ಹಣದಾಸೆಗಾಗಿ ನಾಮಾನನ ಹಿಂದೆ ಹೊರಟು ಹೋದ
ಸುಳ್ಳು ಹೇಳಿಯೆ ಚಿನ್ನ ಬೆಳ್ಳಿ ಬಾಚಿಕೊಂಡ
ಮಾಡಿದ ತಪ್ಪಿಗೆ ಗೇಹೆಜಿ ಕುಷ್ಟ ಹತ್ತಿಸಿಕೊಂಡ (ಬದುಕುವದಕ್ಕೆ )

2.ಯೇಸುವಿನ ಶಿಷ್ಯ ಇದ್ದ ಇಸ್ಕರಿ ಯೂದಾ
ಮೂವತ್ತು ರೂಪಾಯಿಗಾಗಿ ಯೇಸುವನ್ನೆ ಹಿಡಿದುಕೊಟ್ಟ
ಹಣಕ್ಕಾಗಿಯೇ ಯೂದಾ ಆಸೆಪಟ್ಟ
ಮಾಡಿದ ದ್ರೋಹಕ್ಕೆ ಉರ್ಲು ಹಾಕಿಕೊಂಡು ಸತ್ತ

3.ಆಧಿ ಸಭೆಯಲ್ಲಿ ಇದ್ದರು ಭಕ್ತರಾಗಿ ಕೂಡಿ
ಅನನೀಯಾ ಸಪೈರಳ ವಂಚನೆ ಮಾಡಿದರು ನೋಡಿ
ಭೂಮಿಯನ್ನು ಮಾರಿ ಕದ್ದು ಮುಚ್ಚಿ ಇಟ್ಟರು ನೋಡಿ
ಹೇಳಿದಕ್ಕೆ ಸುಳ್ಳು ಇಬ್ಬರ ಹೆಣಬಿತ್ತು ನೋಡಿ

4.ಅನ್ನ ವಸ್ತ್ರಸಾಕು ಜೀವನಕ್ಕೆ ಹೆಚ್ಚು  ಏನು ಬೇಕು
ಐಶ್ವರ್ಯವಂತ ಆಗಲು ಮನಸ್ಸು ಮಾಡಬೇಡಿ
ದುಷ್ಟ ಯೋಜನೆಯ ಉರ್ಲೀನಲ್ಲಿ ಸಿಕ್ಕಿಕೊಳ್ಳಬೇಡಿ
ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಬೇಡಿ

Haṇa haṇa haṇa haṇa sabdava keḷu jhaṇa jhaṇa
adara hinde ni hodare noḍu
taruvadu ninage maraṇa
||badukuvadakke beku haṇa haṇakkagi badukodu keṭṭa guṇa ||
haṇadaseyinda dura iddare aduve bhaktana sreṣṭha guṇa

1.Eliṣana sevaka idda geheji ase buruka
haṇadasegagi namanana hinde horaṭu hoda
suḷḷu heḷiye cinna beḷḷi bacikoṇḍa
maḍida tappige geheji kuṣṭa hattisikoṇḍa (badukuvadakke)

2.Yesuvina siṣya idda iskari yuda
muvattu rupayigagi yesuvanne hiḍidukoṭṭa
haṇakkagiye yuda asepaṭṭa
maḍida drohakke urlu hakikoṇḍu satta

3.Adhi sabheyalli iddaru bhaktaragi kuḍi
ananiya sapairaḷa van̄cane maḍidaru noḍi
bhumiyannu mari kaddu mucci iṭṭaru noḍi
heḷidakke suḷḷu ibbara heṇabittu noḍi

4.Anna vastrasaku jivanakke heccu enu beku
aisvaryavanta agalu manas’su maḍabeḍi
duṣṭa yojaneya urlinalli sikkikoḷḷabeḍi
Kristanambikeyannu biṭṭu aledaḍabeḍi

Sharing is caring!

Leave a comment

Your email address will not be published. Required fields are marked *

*
*